ಘಲ್ ಘಲ್ ಗೆಜ್ಜೆ ಸದ್ದು... ಗಾಢ ನಿದ್ದೆಯಲ್ಲಿದ್ದ ಚಿತ್ರಲೇಖ ತಟ್ಟನೆ ಎದ್ದಳು.ಪಕ್ಕದಲ್ಲಿದ್ದ ಗಂಡ ಅವಿನಾಶ್ ಗೊರಕೆ ಹೊಡೆಯುತ್ತಿದ್ದ. ಕಣ್ಣುಜ್ಜಿಕೊಳ್ಳುತ್ತಾ ಹೊರಗೆ ಬಂದಳು. ಮಗಳ ಕೊನೆಯ ಬಾಗಿಲು ತೆರೆದಿತ್ತು.ಮಧ್ಯಾಹ್ನ ಅಟ್ಟ ಕ್ಲೀನ್ ಮಾಡುವಾಗ ಸಿಕ್ಕ ತನ್ನ ಬಾಲ್ಯದ ಭರತನಾಟ್ಯದ ಗೆಜ್ಜೆ ಅಲ್ಲೇ ದೇವರ ಕೋಣೆಯ ಎದುರಿನಲ್ಲಿತ್ತು.
ಮಗಳ ನೂಪುರಾ ಪಕ್ಕದಲ್ಲೇ ಕೂತಿದ್ಲು. ನಗು ತುಂಬಿ ಉತ್ಸಾಹದಿಂದ "ಅಮ್ಮಾ,ನಾನು ಕ್ಲಾಸಿಕಲ್ ಡ್ಯಾನ್ಸ್ ಗೆ ಸೇರ್ಕೊಳ್ಳ? " ಅಂದಾಗ 'ಇದೇ ವಯಸ್ಸಿಗೆ ತಾನೇ ನಾನೂ ಗೆಜ್ಜೆ ಕಟ್ಟಿ ....' ಚಿತ್ರಗೆ ನೆನಪಿಗೆ ಬಂತು.
ಬಜ್ಜಿ ಬೋಂಡಾ ಮಾಡಿ ತಂದಿಟ್ಟರೂ ನನ್ನ ಅಮ್ಮೂಗೆ ಇನ್ನು ಗೆಜ್ಜೆ ಮೇಲೆ ಕಣ್ಣು.
"ಮತ್ತೆ ಅದ್ಯಾಕಮ್ಮ ಅಟ್ಟ ಮೇಲೆ ಇಟ್ಟಿದೀಯಾ? . ನೀನು ಸಣ್ಣೋಳಿರ್ತಾ ಭರತನಾಟ್ಯ ಡ್ಯಾನ್ಸರ್ ಅಂತೆ, ಹೌದ? ಅಪ್ಪಂಗೆ ಸಿಕ್ಕಿ ಎಷ್ಟು ಒಳ್ಳೇದಾಯ್ತು ನೋಡು.ಇನ್ನು ನಾನೂ ಡ್ಯಾನ್ಸ್ ಕಲೀತಿನಿ"ಅಂದಳು.
"ಹೌದೆ ಅಮ್ಮು, ಅದೆಲ್ಲ ಹಳೆಯ ನೆನಪಷ್ಟೇ..."
"ಅರೆ,ನನಗೆ ಕಥೆ ಕೇಳಬೇಕು"
"ಆವಾಗ ಡ್ಯಾನ್ಸ್ ಮಾಡ್ತಾ ಇದ್ದೆ,ಆಮೇಲೆ ನಿಂತು ಹೋಯ್ತು.ಹಾಗಾಗಿ ಎಲ್ಲಾ ಅಟ್ಟದ ಮೇಲ್ ಹಾಕ್ದೆ "
"ಏ.. ಸರಿಯಾಗಿ ಹೇಳಮ್ಮ... ಪ್ಲೀಸ್..ನಿನವಾಗ ಯಾವ ಸ್ಕೂಲ್ನಲ್ಲಿ ಇದ್ದೆ? ಮತ್ತೆ ನಿನ್ ಟೀಚರ್ ಯಾರು? ಪ್ರೈಸ್ ತುಂಬಾ ಬಂದಿದ್ಯ?"
ಉತ್ತಮ
