ಗ್ರಹ , ತಾರೆ , ರವಿ, ಚಂದ್ರ, ಪುಂಜ, ದಿಗಂತ
ದೂರದತ್ತಲೇ ಸಾಗುವ ಓ ಗೆಳೆಯ,
ನೀನು ಕಳೆದ ಸುಂದರ ರಜತ
ವಸಂತಗಳ ನೆನಪಿದೆಯ?
ಆ ಬಾಲ್ಯ! ಕಂಕುಳಲ್ಲಿ ಮಮ್ಮುಣ್ಣುತ್ತಾ
ಕಂಡ ಚಂದಮಾಮನ ತೋಟ
ಮಿನುಮಿನುಗಿ ಬೆರಗು ಭ್ರಮೆ ಎತ್ತ ನೋಡಿದರತ್ತ
ಅಮ್ಮನೆಂದಳು ಅವಗುಂಟು ಅಮಾವಾಸ್ಯೆ ಕಾಟ !
ತಂದುಕೊಡು ನನಗಿಂದು ಆ ಚಂದಮಾಮ
ಇಲ್ಲದಿರೆ ನನಗೇನು ಬೇಡ ನೀ ಕೇಳು.
ಜಾಸ್ತಿ ಹಟ ಮಾಡದಿರು ಬಂದು ಬಿಟ್ಟರೆ ಗುಮ್ಮ!?
ಮತ್ತೆ ಬರುವನು ಮೂಡಿ ನಾಲ್ಕು ದಿನ ತಾಳು...
ಇಂದು ನಿನ್ನೆಯದಲ್ಲ ಮಾಮ - ಮಗುವಿನ ಬಂಧ
ಹಿರಿದು ನಾವಾದಷ್ಟೆ ವಿಸ್ಮಯದ ಗೂಡು;
ನಾಳೆ ಕೇಳುವನು ಮತ್ತೆ ನಿನ್ನಯ ಕಂದ
ಅಪ್ಪ ತಾ ನಂಗೆ ಆ ಚಂದದಾ ಚೆಂಡು !
ಬಾಲ್ಯದ ನಂಟಲ್ಲಿ ಹುದುಗಿರುವ ಕೌತುಕ
ಪಕ್ವವಾದಂತೆಯೂ ಮನಸು ಮಗುವು,
ಅಂದೆಲ್ಲ ದೂರಬಾನಿನ ಕನಸಿನ ಶಶಾಂಕ
ಹೊಸ ನನಸ ಯಾನದಲಿ ಗೆಳೆಯ ನೀನು , ನಾವು ... !
- ಕಾವ್ಯಮಯಿ

It is very nice. Keep writing
ಪ್ರತ್ಯುತ್ತರಅಳಿಸಿthank you.............
ಅಳಿಸಿ