ತತ್ಸಮಗಳ ಹೊಂದಿಕೊಂಡು
ಅರ್ಥ, ವ್ಯರ್ಥ, ಅಲಂಕಾರೋಪಮ
ಮೌನ ನಿವೇದನೆಗೆ ಪೂರ್ಣವಿರಾಮ.
ಯಿಂದ ,ಗೆ ಗಳ ಕರಣ ಕಾರಕ
ಗುರು ಲಘುಗಳ ಮಧ್ಯೆ ಮರುಕ
ಕರ್ನಾಟ ವೃತ್ತವೃಂದ ಸುತ್ತಿ ಸುತ್ತಿ
ಈ ಮೌನ ನಿವೇದನೆಗೇಕೆ ಅಂಥ ಬುತ್ತಿ?
ಸಾಲು ಅಂಕೆಯ ನುಸುಳಿ ಹಂಸಪಾದ
ನೀರವತೆಯ ಮುಖದಲಿಲ್ಲ ವಿಧ ಸುವಿಧ
ಮೌನ ಹೇಳುವ ಗಂಧ, ರೂಪ, ರಸ
ಎದುರು ನಿಲ್ಲುದೆ ಶಬ್ದಮಣಿಯ ಕೋಶ?
- ಕಾವ್ಯಮಯಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ