ಸಮಯ ವ್ಯರ್ಥ
ನದಿ ಮರ ಗಿಡ ಕರಗಿತೆನ್ನಲು ವ್ಯರ್ಥ
ಕಲ್ಲು ಬಂಡೆ ಕೊಡುವುತೆನ್ನಲು ವ್ಯರ್ಥ
ನಿಂತಲ್ಲೇ ಸವೆಯುವುದು ಆವ ಕಾರ್ಯಕೆ ಸೂಕ್ತ
ಇಟ್ಟಹೆಜ್ಜೆ ನಾಲ್ಕು ದಿವಸದ ಕಾಯ
ನಡೆಯುತ್ತಲೇ ಸವೆಯುವುದು ವ್ಯರ್ಥವೇನು ?
ಇಬ್ಬರಿಗೂ ಒಂದೇ ತಾನೆ
ಸಮಯ!
ನಿರ್ಭಾವ ಅಮ್ಮ
ಹಲವು ವಿಸ್ಮಯ ಒಡಲಲ್ಲಿ ಬಚ್ಚಿಟ್ಟು
ಹಾದಿ ನೋವ ನುಂಗುತ ನಿಂದೆ
ಅಪೂರ್ಣ ಚೇತನ ನನಗಾಗಿ ನೀ ನಕ್ಕೆ
ಎಷ್ಟು ಕಾಲವೊ ಬಲ್ಲ ನಾ ಅತ್ತು ನೀನತ್ತೆ
ಜೀವ ನಿನಗಾರು ಸಾಟಿ
ನಿರ್ಭಾವ. ಜಗದೊಳಗೆ ಅಮ್ಮಾ...

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ