ಸಿದ್ಧಿಯ ಕೊಡು ಬುದ್ಧಿಯ ಕೊಡು ವಿಘ್ನರಾಜನೇ
ಯುಕ್ತಿಯ ಕೊಡು ಶಕ್ತಿಯ ಕೊಡು ಗೌರೀವರನೇ
ಆನೆಮೊಗದ ಕಂದನೀತ ಈಶ ತನಯನು
ಆನಂದನೀವ ನಂದನಿವ ಮೋದಕ ಪ್ರಿಯನು
( ದೇವ ಮೋದಕ ಪ್ರಿಯನು )
ಮೊದಲ ಪೂಜೆ ಮಾಡಿ ನಿನಗೆ ನಮಿಸುವೆನು
ಆರತಿ ಕರ್ಪೂರ ಬೆಳಗಿ ಪೂಜಿಪೆನು
ಮನದಿ ನಿನ್ನ ಭಕುತಿಯಿಂದ ಸ್ತುತಿಸುವೆನು
ಗುಣಾತೀತ ನಿನ್ನ ಪಾಡಿ ಭಜಿಸುವೆನು
( ಪಾಡಿ ಭಜಿಸುವೆನು )
ಅನವರತವು ಬಿಡದೆ ನಿತ್ಯ ನಿನ್ನ ಧ್ಯಾನ
ನೂರೆಂಟು ನಾಮಸ್ಮರಣೆಯಲ್ಲಿಹೆ ಗವಿನ
ಬಯಸುವೆನು ಆಗಲೊಮ್ಮೆ ನಿನ್ನ ದರುಶನ
ನೀ ಭುವಿಗಿಳಿದು ಹರಸಲೆನ್ನ ಜನುಮ ಪಾವನ
( ಎನ್ನ ಜನುಮ ಪಾವನ )
ಚೌತಿಯದಿನ ಮೈಗೆ ಹಚ್ಚಿಕೊಂಡು ಗಂಧ
ಮೂಷಿಕವನು ಏರಿ ಬರಲು ಏನು ಅಂದ
ಗರಿಕೆ ಹುಲ್ಲ ಸವಿಯ ಮೆದ್ದ ವಕ್ರತುಂಡ
ಜಗಕೆ ಸರ್ವ ಕೃಪೆಯ ತೋರು ಫಾಲಚಂದ್ರ
( ತೋರು ಫಾಲಚಂದ್ರ )
- ಕಾವ್ಯಮಯಿ